Asianet Suvarna News Asianet Suvarna News

Prajwal Revanna Obscene Video Case: ಎಚ್‌ಡಿ ರೇವಣ್ಣಗೆ ಮತ್ತೆ ಬಂಧನ ಭೀತಿ, ಜಾಮೀನಿಗೆ ಅರ್ಜಿ ಸಲ್ಲಿಕೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ಹೊಳೆನರಸೀಪುರ ಶಾಸಕ ಹೆಚ್‌ಡಿ ರೇವಣ್ಣ ಅವರು ಮತ್ತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

Hassan MP Prajwal Revanna Obscene video case HD Revanna applied for anticipatory bail in Kidnap case gow
Author
First Published May 3, 2024, 5:20 PM IST

ಬೆಂಗಳೂರು (ಮೇ.3):  ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ಹೊಳೆನರಸೀಪುರ ಶಾಸಕ ಹೆಚ್‌ಡಿ ರೇವಣ್ಣ ಅವರು ಮತ್ತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಬಂಧ ಈ ಅರ್ಜಿ ಸಲ್ಲಿಸಿದ್ದಾರೆ.

ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ರೇವಣ್ಣ ಎಸ್ಐಟಿ  ಮುಂದೆ ಹಾಜರಾಗಿಲ್ಲ. ಬೆಂಗಳೂರಿನ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದ್ದು,  ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆ ನಡೆಸಲಾಗಿದೆ.

ಪ್ರಜ್ವಲ್‌ ಪ್ರಕರಣದ ಸಂತ್ರಸ್ಥೆ ಅಪಹರಣ, ಸಿಎಂ ಆದೇಶ ಬೆನ್ನಲ್ಲೇ ಕಾಣೆಯಾದ ಮೈಸೂರು ಮಹಿಳೆಯ ತೀವ್ರ ಹುಡುಕಾಟ

 ರೇವಣ್ಣ ಪರ ವಕೀಲ ಮೂರ್ತಿ ಡಿ.ನಾಯ್ಕ್ ನ್ಯಾಯಲಯಕ್ಕೆ ಹಾಜರಾಗಿ ನಿರೀಕ್ಷಣಾ ಜಾಮೀನಿಗೆ ವಾದ ಮಂಡನೆ ಮಾಡಿದರು. ಈ ವೇಳೆ ನ್ಯಾಯ ಮೂರ್ತಿಗಳು ಜಾಮೀನು ಸಹಿತ ಸೆಕ್ಷನ್‌? ಅಥವಾ ಜಾಮೀನು ರಹಿತ ಸೆಕ್ಷನ್ ಎಂದು ಕೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ನಾನ್ ಬೇಲೆಬಲ್ ಸೆಕ್ಷನ್ ಹಾಕಲಾಗಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಿದರು. ಎಫ್ಐಆರ್ ಬಗ್ಗೆ ಮಾಹಿತಿ ನೀಡಿದರು.

ಬೇರೆ ಕೇಸಲ್ಲಿ 41a ಅಡಿ ನೋಟಿಸ್ ನೀಡಲಾಗಿದೆ. ನಿನ್ನೆ ರಾತ್ರಿ ಮತ್ತೆ ಎಫ್ಐಆರ್ ದಾಖಲಿಸಲಾಗಿದೆ. ಕಿಡ್ನಾಪ್ ಆದ ಮಹಿಳೆಯ ಹೆಸರು ಎಫ್ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂದು ರೇವಣ್ಣ ಪರ ವಕೀಲ ಮೂರ್ತಿ ಡಿ ನಾಯ್ಕ್ ವಾದ ಮಂಡಿಸಿದರು. ನಾಳೆ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತೇವೆ. ಹೀಗಾಗಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. 

ಪ್ರಕರಣ ಮುಚ್ಚಿ ಹಾಕಲು ಮಹಿಳೆಯ ಕಿಡ್ನಾಪ್‌ ಮಾಡಿಸಿದ್ರಾ HD ರೇವಣ್ಣ? ಸಂತ್ರಸ್ಥೆ ಮಗನ ದೂರಿನನ್ವಯ ಓರ್ವ ವಶಕ್ಕೆ!

ಎಸ್ಐಟಿ ಎಸ್ಪಿಪಿ ಗೆ ನೋಟಿಸ್ ಜಾರಿ ಮಾಡಲಾಯ್ತು. ಇದನ್ನು ಪ್ರಶ್ನಿಸಿದ ರೇವಣ್ಣ ಪರ ವಕೀಲರು ಎಸ್ಪಿಪಿ ಕೇವಲ ಲೈಂಗಿಕ ದೌರ್ಜನ್ಯ ಕೇಸ್ ಮಾತ್ರ ನೇಮಕ ಆಗಿರೋದು ಹೀಗಾಗಿ ಕೋರ್ಟ್ ಸೂಕ್ತ ವಾದ ನಿರ್ಣಯ ತೆಗೆಕೊಳ್ಳುವಂತೆ ಮನವಿ ಮಾಡಿದರು. ಮಧ್ಯಂತರ ನಿರೀಕ್ಷಣಾ ಜಾಮೀನು ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ನಾಳೆ ಬೆಳಗ್ಗೆ 11ಗಂಟೆಗೆ ವಿಚಾರಣೆಯನ್ನು ಮುಂದೂಡಿದರು.

ಮೈಸೂರಿನ ಕೆಆರ್‌ ನಗರದಲ್ಲಿ ಸಂತ್ರಸ್ಥೆಯೊಬ್ಬರನ್ನು ಕಿಡ್ನಾಪ್‌ ಮಾಡಿ ಅಡಗಿಸಿಟ್ಟಿರುವ ಪ್ರಕರಣ ಇದಾಗಿದ್ದು, ಸಂತ್ರಸ್ಥೆ ಮಗ ಈ ಸಂಬಂಧ ದೂರು ನೀಡಿದ್ದಾನೆ. ಪ್ರಕರಣ ಸಂಬಂಧ ಈಗಾಗಲೇ ಕಾಣೆಯಾಗಿರುವ ಮಹಿಳೆಗೆ ತೀವ್ರ ಹುಡುಕಾಟ ನಡೆಯುತ್ತಿದೆ. 

ಸಂತ್ರಸ್ಥೆಯ ಪುತ್ರ ತಮ್ಮ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. 
ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಅಪಹರಣ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು,  ಈ ಮೂಲಕ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತರ ಕೇಸ್ ನಲ್ಲಿ ಮೊದಲ ನಾಪತ್ತೆ  ಕೇಸ್ ದಾಖಲಾಗಿದೆ.

ಸಂತ್ರಸ್ಥೆಯ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸರು ಸತೀಶ್ ಬಾಬುವನ್ನು ವಶಕ್ಕೆ ಪಡೆದಿದ್ದಾರೆ. ಸತೀಶ್ ಬಾಬು ಭವಾನಿ ರೇವಣ್ಣ ಸಂಬಂಧಿಯಾಗಿದ್ದು, ತನ್ನ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಯುವಕ ದೂರು ಕೊಟ್ಟಿದ್ದಾನೆ.

Follow Us:
Download App:
  • android
  • ios