Asianet Suvarna News Asianet Suvarna News

ಮಲ್ಲಿಕಾರ್ಜುನ ಖರ್ಗೆಗೆ ಮುಖಭಂಗ, ಮತಗಳ ಪ್ರಮಾಣ ಘೋಷಣೆ ಹೇಳಿಕೆಗೆ ಆಯೋಗ ತರಾಟೆ!

ಚುನಾವಣಾ ಆಯೋಗ ಪ್ರಕಟಿಸಿದ ಮತಗಳ ಪ್ರಮಾಣ ಘೋಷಣೆಯಲ್ಲಿ ವ್ಯತ್ಯಾಸವಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಚುನಾವಣಾ ಆಯೋಗ ತೀವ್ರ ಅಕ್ಷೇಪ ವ್ಯಕ್ತಪಡಿಸಿದೆ. ಆಧಾರ ರಹಿತ ಹೇಳಿಕೆ ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಪಡಿಸುವಂತಿದೆ ಎಂದು ಆಯೋಗ ಹೇಳಿದೆ.
 

Election Commission warns Congress Mallikarjun Kharge on Voter turnout data its Basle's and Deliberate ckm
Author
First Published May 10, 2024, 6:01 PM IST

ನವದೆಹಲಿ(ಮೇ.10) ಲೋಕಸಭಾ ಚುನಾವಣೆ ನಡುವೆ ದ್ವೇಷಪೂರಿತ ಭಾಷಣ, ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಹಲವು ಕಾರಣಗಳಿಗೆ ಅಭ್ಯರ್ಥಿಗಳು, ನಾಯಕರ ವಿರುದ್ದ ಚುನಾವಣಾ ಆಯೋಗ ನೋಟಿಸ್, ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಚುನಾವಣಾ ಆಯೋಗದ ವಿರುದ್ದವೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದರು. ಮೊದಲೆರಡು ಹಂತದ ಚುನಾವಣೆ ಬಳಿಕ ಆಯೋಗ ಪ್ರಕಟಿಸಿದ ಮತಗಳ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ಇದು ಅಂತಿಮ ಫಲಿತಾಂಶವನ್ನೂ ಬದಲಿಸುವ ಪ್ರಯತ್ನವೇ ಎಂದು ಖರ್ಗೆ ಪ್ರಶ್ನಿಸಿದ್ದರು. ಈ ಆರೋಪಕ್ಕೆ ಚುನಾವಣಾ ಆಯೋಗ ಖಡಕ್ ಉತ್ತರ ನೀಡಿದೆ. ಇಷ್ಟೇ ಅಲ್ಲ ಮಲ್ಲಿಕಾರ್ಜುನ ಖರ್ಗೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆಧಾರ ರಹಿತ ಹೇಳಿಕೆಗಳು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಯಾಗುವಂತಿದೆ. ಈ ರೀತಿಯ ಹೇಳಿಕೆಯಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಅರಾಜಕತೆ ಸೃಷ್ಟಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದು ಆಯೋಗ ಹೇಳಿದೆ.

ಖರ್ಗೆ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ , ಮತದಾನ ಮಾಹಿತಿ ನೈಜ ಸಮಯದಲ್ಲಿ ಲಭ್ಯವಿದೆ. ಆದರೆ ಮತದಾನ ಪ್ರಮಾಣ ಪ್ರಕಟನೆ ವಿಳಂಬವಾಗಿದೆ ಅನ್ನೋ ಕಾಂಗ್ರೆಸ್ ಆರೋಪ ಅಸಂಬದ್ಧ ಎಂದು ಚುನಾವಣಾ ಆಯೋಗ ಹೇಳಿದೆ. ಕಾಂಗ್ರೆಸ್ ಅಥವಾ ಇಂಡಿಯಾ ಒಕ್ಕೂಟದ ಯಾವುದೇ ಅಭ್ಯರ್ಥಿ ಅಂತಿಮ ಮತದಾನದ ಮಾಹಿತಿ ಅಥವಾ ಮತದಾನದ ಶೇಕಡಾವಾರು ಪ್ರಮಾಣವನ್ನು( ಫಾರ್ಮ್ 17ಸಿ), ಮತದಾರರ ಪಟ್ಟಿ ಸಮಸ್ಯೆ ಕುರಿತು ಯಾವುದೇ ದೂರು ನೀಡಿಲ್ಲ. ಈ ಕುರಿತು ಯಾವುದೇ ಪ್ರಸ್ತಾಪ ಆಗಿಲ್ಲ. ಆದರೆ ಮಲ್ಲಿಕಾರ್ಜುನ ಖರ್ಗೆ ಸ್ವಯಂಪ್ರೇರಿತವಾಗಿ ಈ ಆರೋಪ ಮಾಡಿದ್ದಾರೆ.

ಮತ ಪ್ರಮಾಣ ಘೋಷಣೆಯಲ್ಲಿ ವ್ಯತ್ಯಾಸ: ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಅಸಂಬದ್ಧ ಆರೋಪಕ್ಕೆ ಉತ್ತರವಾಗಿ ಸಂಪೂರ್ಣ ಟೇಬಲ್ ನೀಡಲಾಗಿದೆ. ಖರ್ಗೆ ಆರೋಪದಂತೆ ಕ್ರೋಢೀಕರಿಸಿದ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.  2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಇದೇ ರೀತಿ ಆರೋಪ ಮಾಡಿದ್ದರು. ಇದೀಗ ಮಲ್ಲಿಕಾರ್ಜುನ ಖರ್ಗೆ ಹಿಂದಿನ ತಪ್ಪಗಳು ಹಾಗೂ ಮುಖಭಂಗದಿಂದ ಪಾಠ ಕಲಿಯುವ ಬದಲು ಮತ್ತದೇ ಆರೋಪ ಮಾಡಿದ್ದಾರೆ.  

ಖರ್ಗೆ ಆಧಾರರಹಿತ ಆರೋಪ ಚುನಾವಣೆ ಮೇಲೆ ಅನುಮಾನ ಮೂಡಿಸುವಂತಿದೆ. ಭಾರತೀಯ ಸಂವಿಧಾನ ಹಾಗೂ ಜನರ ವಿರುದ್ಧ ಅಪಪ್ರಚಾರ ಮಾಡುವ ಯತ್ನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಸ್ನೇಹಿತರ ಬಗ್ಗೆಯೇ ಪ್ರಧಾನಿ ಮೋದಿ ಟೀಕೆ ಏಕೆ?: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

ಮೊದಲೆರಡು ಹಂತದ ಮತದಾನ ಬಳಿಕ ಚುನಾವಣಾ ಆಯೋಗ ಪ್ರಕಟಿಸಿದ ಮತಗಳ ಶೇಕಡಾವಾರು ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ವಾರಗಳ ಬಳಿಕ ಪ್ರಮಾಣ ಬದಲಿಸಲಾಗಿದೆ. ಇದು ಮುಂಬರುವ ಫಲಿತಾಂಶದಲ್ಲೂ ಬದಲಾವಣೆ ಮಾಡುವ ಪ್ರಯತ್ನವೇ ಎಂದು ಖರ್ಗೆ ಆರೋಪಿಸಿದ್ದರು.
 

Follow Us:
Download App:
  • android
  • ios