Asianet Suvarna News Asianet Suvarna News

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲಿ: ಸಿಟಿ ರವಿ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನಾದರೂ ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. 

Lok sabha election 2024 centre released karnataka drought relief fund says bjp former minister CT Ravi at chikkamagaluru rav
Author
First Published Apr 27, 2024, 9:24 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.27) : ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನಾದರೂ ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. 

ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವ ಆಸಕ್ತಿಯಿಲ್ಲ. ರೈತರ ವಿಷಯದಲ್ಲಿ ರಾಜಕಾರಣ ಮಾಡುವುದರಲ್ಲೇ ಅವರಿಗೆ ಆಸಕ್ತಿ. ಕೇಂದ್ರ ಈಗ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲಿ ಎಂದರು.

ರಾಜ್ಯದಲ್ಲಿ ಆರನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರು ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಹೇಳಿಕೆ ನೀಡಿದ್ದರು. ಇದು ಈ ಸರ್ಕಾರಕ್ಕಿರುವ ರೈತರ ಮೇಲಿನ ಕಾಳಜಿಯನ್ನು ತೋರಿಸುತ್ತದೆ ಎಂದು ದೂರಿದರು.

ಕೇಂದ್ರದಿಂದ ಬರ ಪರಿಹಾರ ಹಣ ಇನ್ನೂ ಬಂದಿಲ್ಲ, ಯಾವ ಬ್ಯಾಂಕ್‌ಗೆ ಜಮಾ ಆಗುತ್ತೋ ಗೊತ್ತಿಲ್ಲ: ಡಿಕೆಶಿ

ಪ್ರೋತ್ಸಾಹ ಧನವನ್ನು ನೀಡಲಿ : 

ರೈತರು ಸಂಕಷ್ಟಕ್ಕೊಳಗಾಗಿ ಹತಾಶೆಯಿಂದ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಾರೆ. ಹಣಕ್ಕಾಗಿ ಯಾರಾದರೂ ಆತ್ಮಹತ್ಯೆ ಮಾಡಿ ಕೊಳ್ಳುತ್ತಾರ ಎಂದು ಪ್ರಶ್ನಿಸಿದ ಅವರು, ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಉದ್ಯೋಗ ಸೃಷ್ಟಿಸಬೇಕು. ಆದರೆ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರು ರಾಜಕಾರಣದಲ್ಲಿ ನಿರತರಾಗಿದ್ದಾರೆ. ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಮುಂದಾದರೂ ರೈತರ ಸಮಸ್ಯೆಗಳಿಗೆ ಪ್ರಾಮಾನಿಕವಾಗಿ ಸ್ಪಂಧಿ ಸುವ ಕೆಲಸ ಮಾಡಲಿ ಎಂದು ಹೇಳಿದರು.ಇಲ್ಲಿನ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ಕೊಟ್ಟು ತಕ್ಷಣ ಕೇಂದ್ರದ ಆರು ಸಾವಿರ ಹಾಗೂ ರಾಜ್ಯ ಸರ್ಕಾರ ಆರು ಸಾವಿರ ಸೇರಿಸಿ ಹನ್ನೆರಡು ಸಾವಿರ ರೂ. ನೀಡಿ. ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ಖರ್ಗೆಯಿಂದ ಎಮೋಷನಲ್ ಬ್ಲಾಕ್ಮೇಲ್ 

ಜಾಹೀರಾತು ಕೊಡುವ ಹಣದ ಅರ್ಧದಲ್ಲಿ ಹಾಲು ಉತ್ಪಾದಕರ ಸಬ್ಸಿಡಿ ಕೊಡಬಹುದಿತ್ತು. ನಿಮ್ಮಗೆ ಜಾಹೀರಾತು ನೀಡುವುದಕ್ಕೆ ಹಣವಿದೆ. ಸಬ್ಸಿಡಿ ಹಣ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಗಣಿ ಬಾಚಿ ಕಷ್ಟಪಡುವ ಮಹಿಳೆಯರಿಗೆ ಸಬ್ಸಡಿ ಕೊಡದಿರುವುದು ದುರಾದೃಷ್ಟಕರ ಎಂದರು.

ರೈತ ವಿದ್ಯಾನಿಧಿ ಸ್ಥಗಿತಗೊಳಿಸಿದ್ದು ಯಾವ ನ್ಯಾಯ, ನೀವು ನ್ಯಾಯದ ಬಗ್ಗೆ ಮಾತನಾಡುತ್ತೀರಿ, ಹಾಗಿದ್ದರೇ ರೈತ ವಿದ್ಯಾ ನಿಧಿ ಸ್ಥಗಿತಗೊಳಿಸಿರುವುದು ರೈತರ ಮಕ್ಕಳಿಗೆ ಮಾಡಿರುವ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ(AICC President Mallikarjun kharge) ಭಾಷಣದ ವೇಳೆ ಭಾವುಕರಾಗಿದ್ದಕ್ಕೆ ಪ್ರತಿಕ್ರಿಯಿಸಿ, ಖರ್ಗೆ ಅವರು ಅಳಿಯನನ್ನು ಗೆಲ್ಲಿಸಲು ಎಮೋಷನಲ್ ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಅಳಿಯ ಸೋಲುತ್ತಾನೆಂಬ ಗುಪ್ತಚರ ವರದಿ ಹೋಗಿರುವ ಕಾರಣ ಏನಾದರೂ ಮಾಡಿ ಅಳಿಯನನ್ನು ಗೆಲ್ಲಿಸಬೇಕೆಂಬ ಹತಾಶೆಯಲ್ಲಿ ಇದ್ದಾರೆ ಎಂದರು.

ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ (Priyank kharge) ಆಡಳಿತ ವೈಖರಿ ನೋಡಿ ಜನ ಮಾತ್ರವಲ್ಲ ಕಾಂಗ್ರೆಸ್ನವರು ಬೇಸರಗೊಂಡಿದ್ದಾರೆ. ಅಳಿಯ ಸೋಲಬೇಕೆಂಬ ಚಿಂತನೆಯಲ್ಲಿ ಕಾಂಗ್ರೆಸ್ನವರು ಇರುವುದರಿಂದ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರವಿದು. ಅವರೇನಾದರೂ ದೇಶ ಹಿತದ ಬಗ್ಗೆ ಮಾತನಾಡಿದ್ದಾರಾ, ಎಲ್ಲೂ ದೇಶದ ಹಿತದ ಬಗ್ಗೆ ಮಾತನಾಡಿಲ್ಲ. ಏನಾದರೂ ಮಾಡಿ ಅನುಕಂಪ ಗಿಟ್ಟಿಸಿಕೊಂಡು ಅಳಿಯನನ್ನು ಗೆಲ್ಲಿಸಬೇಕೆಂಬುದು ಮಾತ್ರ ಕಾಣುತ್ತಿದೆ ಎಂದು ಟೀಕಿಸಿದರು.

ಹಾಸನ ಪೆನ್‌ಡ್ರೈವ್ ಪ್ರಕರಣ: ಇದರ ಬಗ್ಗೆ ಕುಮಾರಣ್ಣ, ಅಶೋಕಣ್ಣ ಹೇಳಬೇಕು -ಡಿಕೆ ಶಿವಕುಮಾರ

ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು 

ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿ, ಓಲೈಕೆ ರಾಜನೀತಿಯಿಂದ ಭಯೋತ್ಪಾದನೆ ಬೆಳೆಯಿತು. ಭಯೋತ್ಪಾದನೆ ಯಿಂದ ಸೈನಿಕರು ಬಲಿಯಾಗಬೇಕಾಯಿತು. ಭಯೊತ್ಪಾದಕರನ್ನು ಮಟ್ಟಹಾಕಲು ಸರ್ಜಿಕಲ್ ಸ್ಟ್ರೈಕ್ ಜೀರೋ ಟ್ರಾಲೆನ್ಸ್ ಬೇಕು ಕಾಂಗ್ರೆಸ್ ಜೀರೋ ಟ್ರಾಲೆನ್ಸ್ಗೆ ಎಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಶ್ನಿಸಿದ ಅವರು ಇಷ್ಟರ ಮೇಲಾದರೂ ರೈತರು, ಸೈನಿಕರನ್ನು ಅಪಮಾನ ಮಾಡುವುದನ್ನು ಕಾಂಗ್ರೆಸ್ನವರು ಬಿಡಬೇಕು ಎಂದು ಹೇಳಿದರು.

Follow Us:
Download App:
  • android
  • ios