Asianet Suvarna News Asianet Suvarna News

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 540 ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

ಕರ್ನಾಟಕ ಅರಣ್ಯ ಇಲಾಖೆಯು ನೇರ ನೇಮಕಾತಿ ಆಧಾರದ ಮೇಲೆ 540 ಗಸ್ತು ಅರಣ್ಯ ಪಾಲಕ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Karnataka Forest Guard Notification 2023 for 540 Patrol Forest Warden post gow
Author
First Published Dec 23, 2023, 8:33 AM IST

ಕರ್ನಾಟಕ ಅರಣ್ಯ ಇಲಾಖೆಯು ನೇರ ನೇಮಕಾತಿ ಆಧಾರದ ಮೇಲೆ 540 ಗಸ್ತು ಅರಣ್ಯ ಪಾಲಕ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು  ಈಗಾಗಲೇ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-12-2023. ಶುಲ್ಕ ಪಾವತಿಗೆ ಕೊನೆಯ ದಿನಾಂಕ 05-01-2024 ಆಗಿದೆ.

ಹುದ್ದೆಯ ವಿವರ

ಗಸ್ತು ಅರಣ್ಯ ಪಾಲಕ - 540 ಹುದ್ದೆ (ವಿಭಾಗವಾರು ಹುದ್ದೆಗಳ ಮಾಹಿತಿ ಈ ಕೆಳಗಿನಂತಿದೆ)

ಬೆಂಗಳೂರು ವೃತ್ತ -46 ಹುದ್ದೆ

ಬೆಳಗಾವಿ ವೃತ್ತ – 10 ಹುದ್ದೆ

ಬಳ್ಳಾರಿ ವೃತ್ತ – 28 ಹುದ್ದೆ

ಚಾಮರಾಜನಗರ ವೃತ್ತ – 77 ಹುದ್ದೆ

ಚಿಕ್ಕಮಗಳೂರು ವೃತ್ತ -50 ಹುದ್ದೆ

ಧಾರವಾಡ ವೃತ್ತ- 05 ಹುದ್ದೆ

ಹಾಸನ ವೃತ್ತ -17 ಹುದ್ದೆ

ಕೆನರಾ ವೃತ್ತ – 51 ಹುದ್ದೆ

ಕೊಡಗು ವೃತ್ತ - 33 ಹುದ್ದೆ

ಕಲಬುರ್ಗಿ ವೃತ್ತ-26 ಹುದ್ದೆ

ಮಂಗಳೂರು ವೃತ್ತ- 57 ಹುದ್ದೆ

ಮೈಸೂರು ವೃತ್ತ- 45 ಹುದ್ದೆ

ಶಿವಮೊಗ್ಗ ವೃತ್ತ- 61 ಹುದ್ದೆ

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ

01-12-2023

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

30-12-2023

ಶುಲ್ಕ ಪಾವತಿಗೆ ಕೊನೆಯ ದಿನಾಂಕ

05-01-2024

ಅರ್ಜಿ ಶುಲ್ಕ

ಸಾಮಾನ್ಯ ವರ್ಗಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ರು. 200

ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ/ ತೃತೀಯಲಿಂಗಿ ಅಭ್ಯರ್ಥಿಗಳಿಗೆ - ರು. 100

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಿಗೆ - ರು. 100

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ಕ್ಕೆ ಸೇರಿದ ಮಹಿಳಾ ಅಭ್ಯರ್ಥಿಗಳಿಗೆ/ ತೃತೀಯಲಿಂಗಿ ಅಭ್ಯರ್ಥಿಗಳಿಗೆ - ರು. 50

ವಯಸ್ಸಿನ ಮಿತಿ (01-12-2023 ರಂತೆ) ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು

ಎಸ್‌ ಸಿ/ ಎಸ್‌ ಟಿ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 32 ವರ್ಷಗಳು

2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 30 ವರ್ಷಗಳು

ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯಸ್ಸು 27 ವರ್ಷಗಳು

ವಿದ್ಯಾರ್ಹತೆ

ಅಭ್ಯರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿ.ಯು.ಸಿ. ವಿದ್ಯಾರ್ಹತೆ ಅಥವಾ

ಪಿ.ಯು.ಸಿ. ವಿದ್ಯಾರ್ಹತೆಯ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಪರೀಕ್ಷಾ ವಿಧಾನ

1. ಶಾರೀರಿಕ ಮಾನದಂಡ ಪರೀಕ್ಷೆ:

ಅ) ಪುರುಷ ಅಭ್ಯರ್ಥಿಗಳು ಕನಿಷ್ಠ 163 ಸೆ.ಮೀ ಮತ್ತು ಮಹಿಳೆಯರು ಕನಿಷ್ಠ 150 ಸೆ.ಮೀ ಎತ್ತರ ಹೊಂದಿರಬೇಕು.

ಆ) ಪುರುಷ ಅಭ್ಯರ್ಥಿಗಳ ಎದೆಯ ಸುತ್ತಳತೆಯು ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆ.ಮೀ ಇರಬೇಕು.

2. ದೈಹಿಕ ತಾಳ್ವಿಕೆ ಪರೀಕ್ಷೆ

ಅ) ಪುರುಷ ಅಭ್ಯರ್ಥಿಗಳು 1600 ಮೀ ಓಟವನ್ನು 7 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.

ಆ) ಮಹಿಳಾ ಅಭ್ಯರ್ಥಿಗಳು 1000 ಮೀ ಓಟವನ್ನು 6 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು.

3. ದೈಹಿಕ ಸಮರ್ಥತೆ ಪರೀಕ್ಷೆ

ಅ) ಪುರುಷ ಅಭ್ಯರ್ಥಿಗಳು 100 ಮೀ ಓಟವನ್ನು 15 ಸೆಕೆಂಡುಗಳಲ್ಲಿ ಮತ್ತು ಮಹಿಳಾ ಅಭ್ಯರ್ಥಿಗಳು 18.5 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.

ಆ) ಪುರುಷ ಅಭ್ಯರ್ಥಿಗಳು 1.20 ಮೀ ಹಾಗೂ ಮಹಿಳಾ ಅಭ್ಯರ್ಥಿಗಳು 0.90 ಮೀ ಎತ್ತರ ಜಿಗಿತವನ್ನು ಪೂರ್ಣಗೊಳಿಸಬೇಕು.

ಇ) ಪುರುಷ ಅಭ್ಯರ್ಥಿಗಳು 3.80 ಮೀ ಹಾಗೂ ಮಹಿಳಾ ಅಭ್ಯರ್ಥಿಗಳು 2.50 ಮೀ ಉದ್ದ ಜಿಗಿತವನ್ನು ಪೂರ್ಣಗೊಳಿಸಬೇಕು.

ಈ) ಪುರುಷ ಅಭ್ಯರ್ಥಿಗಳು 5.60 ಮೀ ಹಾಗೂ ಮಹಿಳಾ ಅಭ್ಯರ್ಥಿಗಳು 3.76 ಮೀ ದೂರ ಶಾಟ್‌ ಪುಟ್‌ ಎಸೆಯಬೇಕು.

ಉ) ಪುರುಷ ಅಭ್ಯರ್ಥಿಗಳು 800 ಮೀ ಓಟವನ್ನು 2.50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.

ಊ) ಮಹಿಳಾ ಅಭ್ಯರ್ಥಿಗಳು 200 ಮೀ ಓಟವನ್ನು 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.

4. ವಸ್ತು ನಿಷ್ಠ ಮಾದರಿ ಅಪ್ಟಿಟ್ಯೂಡ್‌ ಪರೀಕ್ಷೆ

ಇಲಾಖೆಯು ಸೂಚಿಸಿದ ಶಾರೀರಿಕ ಮಾನದಂಡ ಪರೀಕ್ಷೆ , ದೈಹಿಕ ತಾಳ್ವಿಕೆ ಪರೀಕ್ಷೆ , ದೈಹಿಕ ಸಮರ್ಥತೆ ಪರೀಕ್ಷೆ ಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಮಾತ್ರ ಗಣಿತ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 100 ಪ್ರಶ್ನೆಗಳಿಗೆ 2 ಗಂಟೆಯ ಅವಧಿಯಲ್ಲಿ 100 ಅಂಕಗಳಿಗೆ ವಸ್ತು ನಿಷ್ಠ ಮಾದರಿ ಅಪ್ಟಿಟ್ಯೂಡ್‌ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳ ಪಿಯುಸಿ ಯ ಶೇಕಡಾ 50 ಅಂಕಗಳು ಮತ್ತು ವಸ್ತು ನಿಷ್ಠ ಮಾದರಿ ಅಪ್ಟಿಟ್ಯೂಡ್‌ ಪರೀಕ್ಷೆಯ ಶೇಕಡಾ 50 ಅಂಕಗಳ ಆಧಾರದ ಮೇಲೆ ಮೆರಿಟ್‌ ಪಟ್ಟಿ ತಯಾರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌

Follow Us:
Download App:
  • android
  • ios