Asianet Suvarna News Asianet Suvarna News

ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲದಿದ್ದರೂ ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ

ಕರ್ನಾಟಕದಲ್ಲಿ ತೀವ್ರ ಬರಗಾಲವಿದ್ದು, ಕುಡಿಯುವ ನೀರಿಗೂ ಹಾಹಾಕರವಿದೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರಿಗಾಗಿ ಅರ್ಜಿ ಸಲ್ಲಿಸದ ತಮಿಳುನಾಡು ಸರ್ಕಾರಕ್ಕೆ ಸಿಡಬ್ಲ್ಯೂಆರ್‌ಸಿ ಮುಖಭಂಗ ಮಾಡಿ ಕಳಿಸಿದೆ.

Karnataka Despite drought also Tamil Nadu request Cauvery water but CWRC reject application sat
Author
First Published May 1, 2024, 7:59 PM IST

ನವದೆಹಲಿ (ಮೇ 01): ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಂತಹ ಬರಗಾಲದ ನಡುವೆಯೂ ನಾಚಿಕೆಯಿಲ್ಲದೇ ಏಪ್ರಿಲ್ ಹಾಗೂ ಮೇ ತಿಂಗಳ ತಮಿಳುನಾಡಿನ ಪಾಲಿನ ನೀರನ್ನು ಬಿಡುವಂತೆ ಅರ್ಜಿ ಸಲ್ಲಿಸಿದ ತಮಿಳುನಾಡು ಸರ್ಕಾರಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹಾಮಂಗಳಾರತಿ ಮಾಡಿ ಬರಿಗೈಯಲ್ಲಿ ವಾಪಸ್ ಕಳಿಸಿದೆ. ನೀರು ಬಿಡುವಂತೆ ಸಲ್ಲಿಕೆ ಮಾಡಿದ ಅರ್ಜಿಯನ್ನು ತಿರಸ್ಕರಿಸಿದೆ.

ಕಾವೇರಿ ನೀರು‌ ನಿರ್ವಹಣೆ ಬಿಕ್ಕಟ್ಟು ವಿಚಾರದಲ್ಲಿ ಆಗಿಂದಾಗ್ಗೆ ಕರ್ನಾಟಕಕ್ಕೆ ಭಾರಿ ಸಂಕಷ್ಟ ತಂದಿಡುತ್ತಿದ್ದ ತಮಿಳುನಾಡಿಗೆ ಈ ಬಾರಿ ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ಮುಖಭಂಗವಾಗಿದೆ. ಯಾರಾದ್ರೂ ಹಾಳಾಗೋಗ್ಲಿ ನಾವು ನೆಟ್ಟಗಿದ್ದರೆ ಸಾಕು ಎನ್ನುವ ಮನಸ್ಥಿತಿಯಿಂದ ಕರ್ನಾಟಕದಲ್ಲಿ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದರೂ, ತಮಗೆ ಸಾಮಾನ್ಯ ವರ್ಷಗಳಂತೆ ನೀರು ಕೊಡಬೇಕು ಎಂದು ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ನಮಗೆ ಕರ್ನಾಟಕದಿಂದ ಏಪ್ರಿಲ್ ಮತ್ತು ಮೇ ತಿಂಗಳ ನೀರನ್ನು ಬಿಟ್ಟಿಲ್ಲ. ಕೂಡಲೇ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಕಾವೇರಿ ನೀಡು ನಿಯಂತ್ರಣ ಸಮಿತಿಯಿಂದ ತಮಿಳುನಾಡಿಗೆ ನೀರನ್ನು ಹರಿಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.

ಹಾಹಾಕಾರದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವರದಿ, ಕರ್ನಾಟಕ ಸರ್ಕಾರದ ಸ್ಪಷ್ಟನೆ!

ತಮಿಳುನಾಡಿನ ಅರ್ಜಿಯನ್ನು ಸ್ವೀಕರಿಸಿ ಪರಿಶೀಲನೆ ಮಾಡಿದ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಇಲ್ಲ. ಅಲ್ಲಿನ ಜನರಿಗೆ ಕುಡಿಯುವ ನೀರಿಗೂ ಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಉತ್ತರಿಸಿದೆ. ಇನ್ನು ತಮಿಳುನಾಡಿನಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವಂತೆ ಮಳೆ ಬಂದಿದ್ದರೂ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ ಆಗಿದೆ.

ಸಂಸದ ಪ್ರಜ್ವಲ್ ರೇವಣ್ಣರನ್ನು ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಬಂಧಿಸಲು ಸಾಧ್ಯವಿಲ್ಲ; ವಕೀಲ ಸುಧನ್ವ ಮಾಹಿತಿ

ಮೇ 16ಕ್ಕೆ ಕಾವೇರಿ ನೀರು ಹಂಚಿಕೆಗೆ ಕೊನೆಯ ಸಭೆ: ಇನ್ನು ಕಾವೇರಿ ನೀರಿನ ಬಿಕ್ಕಟ್ಟು ಬಗೆಹರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಪಿಸಲಾದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) 2023-24ನೇ ಸಾಲಿನ ಮಳೆಗಾಲದ ನೀರು ಹಂಚಿಕೆ ಸಭೆಯು ಪೂರ್ಣಗೊಂಡಿದೆ. ಆದರೆ, ಮತ್ತೊಂದು ಸಂಸ್ಥೆಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯು ಮೇ 16ರಂದು ನಡೆಯಲಿದೆ. ಈ ಸಭೆಯು ಈ ಸಾಲಿನ ಮಳೆಗಾಲದ ಕಾವೇರಿ ನೀರು ಹಂಚಿಕೆಯ ಕೊನೆಯ ಸಭೆಯಾಗಿದೆ. ಈ ಸಭೆಯಲ್ಲಿಯೂ ನೀರು ಬಿಡುವಂತೆ ಆದೇಶ ನೀಡದಿದ್ದರೆ ಕರ್ನಾಟಕಕ್ಕೆ ಕುಡಿಯುವ ನೀರನ್ನು ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದರೆ, ರಾಜ್ಯಕ್ಕೆ ಸಂಕಷ್ಟ ಎದುರಾಗಲಿದೆ.

Follow Us:
Download App:
  • android
  • ios