Asianet Suvarna News Asianet Suvarna News

ದೇವರಾಯನದುರ್ಗ: ಬಾವಲಿಗಳ ಬೇಟೆಯಾಡುವ ಚಿರತೆಯ ಅಪರೂಪದ ಫೋಟೋ ವೈರಲ್‌

ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಬಾವಲಿ ಹಿಡಿದಿರುವ ಅಪರೂಪದ ದೃಶ್ಯವೊಂದು ಕ್ಯಾಮೆರಾ ಟ್ರ್ಯಾಪ್ ನಲ್ಲಿ ಪತ್ತೆಯಾಗಿದೆ.  ಆದರೆ ಪ್ರಪಂಚದಲ್ಲಿ ಇದುವರೆಗೂ ಚಿರತೆಯೊಂದು ಬಾವಲಿ ಹಿಡಿದು ತಿಂದ ದೃಶ್ಯ ಪತ್ತೆಯಾಗಿರಲಿಲ್ಲ.

Devarayanadurga  A camera trap caught a rare sight in which A leopard hunting bats in Devarayanadurga reserved forest akb
Author
First Published Oct 17, 2023, 10:10 AM IST

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಬಾವಲಿ ಹಿಡಿದಿರುವ ಅಪರೂಪದ ದೃಶ್ಯವೊಂದು ಕ್ಯಾಮೆರಾ ಟ್ರ್ಯಾಪ್ ನಲ್ಲಿ ಪತ್ತೆಯಾಗಿದೆ.  ಆದರೆ ಪ್ರಪಂಚದಲ್ಲಿ ಇದುವರೆಗೂ ಚಿರತೆಯೊಂದು ಬಾವಲಿ ಹಿಡಿದು ತಿಂದ ದೃಶ್ಯ ಪತ್ತೆಯಾಗಿರಲಿಲ್ಲ.  ಹೊಳೆಮತ್ತಿ ನೇಚರ್ ಫೌಂಡೇಶನ್ (Holemati Nature Foundation)ಮತ್ತು ನೇಚರ್ ಕರ್ವೇಷನ್ ಫೌಂಡೇಶನ್‌ (Nature Curvature Foundation) ಸಂಜಯ್ ಗುಬ್ಬಿ ಮತ್ತು ತಂಡ ದೇವರಾಯನದುರ್ಗದಲ್ಲಿ ಚಿರತೆಗಳ ಅಧ್ಯಯನಕ್ಕಾಗಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಈ ಆಸಕ್ತಿದಾಯಕ ಚಿತ್ರ ದಾಖಲಾಗಿದೆ.

ಎರಡು ಸಂದರ್ಭಗಳಲ್ಲಿ, 5 ರಿಂದ 6 ವರ್ಷದ ಹೆಣ್ಣು ಚಿರತೆಯೊಂದು ಬಾವಲಿಗಳನ್ನು ಬೇಟೆಯಾಡಿ ಕಚ್ಚಿಕೊಂಡು ಹೋಗುತ್ತಿರುವ ಅಪರೂಪದ ಸಂಗತಿ ದಾಖಲಾಗಿದೆ. ಚಿರತೆಗಳು ಬಾವಲಿಗಳನ್ನು ತಿನ್ನುತ್ತಿರುವ ವಿಚಾರ ಬಹುಶಃ ಪ್ರಪಂಚದಲ್ಲಿ ಇನ್ನೆಲ್ಲೂ ದಾಖಲಾಗಿರುವ ಪ್ರಸಂಗಗಳಿಲ್ಲ. ಆದರೆ, ಚಿರತೆ, ಬಾವಲಿಗಳಿರುವ ಮರ ಹತ್ತಿ ಬೇಟೆಯಾಡಿತೇ ಅಥವಾ ಇನ್ಯಾವುದಾದರೂ ವಿಧಾನವನ್ನು ಉಪಯೋಗಿಸಿ ಬೇಟೆಯಾಡುತ್ತಿದೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ ಎಂದು ಫೌಂಡೇಶನ್‌ ತಿಳಿಸಿದೆ.

ಇಸ್ರೇಲ್ ರಾಜತಾಂತ್ರಿಕನ ವಜಾ: ಗಾಜಾಪಟ್ಟಿ ಕ್ಲೀನ್ ಸ್ವಿಪ್‌ ಮಾಡುವ ಇಸ್ರೇಲ್‌ ಯತ್ನಕ್ಕೆ ಅಮೆರಿಕಾದಿಂದಲೂ ವಿರೋಧ

ಚಿರತೆಗಳು (ಪ್ಯಾಂಥೇರಾ ಪರ‍್ಡಸ್) ಹಲವು ವಿಧದ ಪ್ರಾಣಿಗಳನ್ನು ಭಕ್ಷಿಸುವುದು ವೈಜ್ಞಾನಿಕವಾಗಿ ದಾಖಲಾಗಿದೆ. ಕಡವೆ , ಸಾರಂಗ, ಕಾಡು ಹಂದಿಯಂತಹ ಪ್ರಾಣಿಗಳು, ಕೊಂಡುಕುರಿ, ಕಾಡುಕುರಿಯಂತಹ ಮಧ್ಯಮ ಗಾತ್ರದ ಪ್ರಾಣಿಗಳು ಮತ್ತು ಮೊಲ, ಮುಳ್ಳುಹಂದಿ, ಚಿಪ್ಪು ಹಂದಿಯಂತಹ (porcupine) ಸಣ್ಣ ಗಾತ್ರದ ಪ್ರಾಣಿಗಳನ್ನು ತಿನ್ನುತ್ತವೆ. ಅದರೊಡನೆ ಕುರಿ, ಮೇಕೆ, ಸಾಕು ನಾಯಿಗಳನ್ನು ಸಹ ಚಿರತೆಗಳು ಆಹಾರವಾಗಿ ಬೇಟೆಯಾಡುತ್ತವೆ.

ಚಿರತೆಗಳು ಎಲ್ಲ ಪ್ರದೇಶಗಳಲ್ಲೂ ಹೊಂದಿಕೊಂಡು ಬದುಕುವುದಕ್ಕೆ ಕಾರಣವಾಗಿದೆ. ಹೆಗ್ಗಣ, ಉಡ, ಮೀನಿನಂತಹ ಆಸಕ್ತಿದಾಯಕ ಪ್ರಾಣಿಗಳು ಕೂಡ ಅವುಗಳ ಆಹಾರದ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ, ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯದಲ್ಲಿ (Devarayanadurga reserved forest) ದಾಖಲಾಗಿರುವ, ಚಿರತೆಗಳ ನಡವಳಿಕೆಯ ವಿಶಿಷ್ಟ ಸಂಗತಿ ಬಹುಶಃ ಪ್ರಪಂಚದಲ್ಲೇ ಮೊಟ್ಟ ಮೊದಲ ಕಂಡು ಬಂದಿರುವ ಮಾಹಿತಿ.

4 ದಿಕ್ಕುಗಳಿಂದ ಇಸ್ರೇಲ್ ಸುತ್ತುವರಿದ ಶತ್ರು ರಾಷ್ಟ್ರಗಳು: ಗಾಜಾ ಸಿರಿಯಾ ಲೆಬನಾನ್‌ ಮೂಲಕ ದಾಳಿ

ಈ ಹೆಣ್ಣು ಚಿರತೆ ಅದೇ ಸ್ಥಳದಲ್ಲಿ ತನ್ನ ಆರು ತಿಂಗಳ ಮರಿಯೊಡನೆ ಇರುವ ದೃಶ್ಯ ಕೂಡ ದಾಖಲಾಗಿದೆ. ಹಾಗಾಗಿ, ಈ ಮರಿಯೂ ಕೂಡ ಬಾವಲಿಗಳನ್ನು ಬೇಟೆಯಾಡುವ ಈ ವಿಶೇಷ ಗುಣ ಕಲಿಯಬಹುದು ಎನ್ನುತ್ತಾರೆ ಈ ಅಧ್ಯಯನವನ್ನು ಮಾಡುತ್ತಿರುವ ವನ್ಯಜೀವಿ ವಿಜ್ಞಾನಿ ಡಾ.ಸಂಜಯ್ ಗುಬ್ಬಿ(Sanjay Gubbi). ಆಂಗ್ಲದಲ್ಲಿ ಇಂಡಿಯನ್ ಫ್ಲೈಯಿಂಗ್ ಫಾಕ್ಸ್ ಮತ್ತು ಕನ್ನಡದಲ್ಲಿ ಹಾಲಕ್ಕಿ ಎಂದು ಕರೆಯಲ್ಪಡುವ ಈ ಬಾವಲಿಗಳು ಪ್ರಪಂಚದಲ್ಲೇ ಅತಿ ದೊಡ್ಡದಾದ ಬಾವಲಿಗಳಲ್ಲೊಂದು.1.5 ಕೆ.ಜಿಯಷ್ಟು ತೂಗುವ ಈ ಬಾವಲಿಗಳು 5 ಅಡಿಯಷ್ಟು ಅಗಲದ ರೆಕ್ಕೆಗಳನ್ನು ಹೊಂದಿರುತ್ತವೆ.

ಇಸ್ರೇಲ್ ಪ್ಯಾಲೇಸ್ತೇನ್ ಯುದ್ಧ: ಹಮಾಸ್ ಉಗ್ರರಿಗೆ ಚೀನಾದಿಂದ ಶಸ್ತ್ರಾಸ್ತ್ರ ಪೂರೈಕೆ?

Follow Us:
Download App:
  • android
  • ios