Health

ಆರೋಗ್ಯ

ಮಳೆಗಾಲದಲ್ಲಿ ತೂಕ ಇಳಿಸ್ಕೋಳ್ಳೋದು ತುಂಬಾ ಸುಲಭ, ಈ ಟಿಪ್ಸ್ ಟ್ರೈ ಮಾಡಿ

Image credits: others

ವರ್ಕೌಟ್‌

ಮಳೆಗಾಲದಲ್ಲಿ ಮನೆಯಿಂದ ಹೊರಗಡೆ ಹೋಗಿ ವರ್ಕೌಟ್ ಮಾಡುವುದು ಸ್ಪಲ್ಪ ಕಷ್ಟ. ಹೀಗಿರುವಾಗ ನೀವು ಇಂಡೋರ್ ವರ್ಕೌಟ್‌ಗೆ ಪ್ರಾಶಸ್ತ್ರ್ಯ ನೀಡಬಹುದು. ಯೋಗ, ಡ್ಯಾನ್ಸ್ ಮಾಡುವ ಮೂಲಕ ತೂಕ ಇಳಿಸಿಕೊಳ್ಳಬಹುದು.

Image credits: others

ಸೀಸನಲ್‌ ಫ್ರುಟ್ ತಿನ್ನಿ

ಮಳೆಗಾಲದಲ್ಲಿ ಹಲವಾರು ಆರೋಗ್ಯಕರ ಹಣ್ಣುಗಳು, ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಲಿಚಿ, ಚೆರಿ, ಸೊಪ್ಪು ತರಕಾರಿಗಳು, ಕಾಳುಗಳನ್ನು ಅಡುಗೆಯಲ್ಲಿ ಹೆಚ್ಚು ಬಳಸಿ. ಇದು ದೇಹವನ್ನು ಸ್ಟ್ರಾಂಗ್ ಮಾಡುತ್ತದೆ.

Image credits: others

ತರಕಾರಿಗಳ ಸೂಪ್‌

ಮಳೆಗಾಲದಲ್ಲಿ ಬೆಚ್ಚಗಿರಲು ತರಕಾರಿಗಳ ಸೂಪ್ ಕುಡಿಯಿರಿ. ಇದಕ್ಕೆ ಸೀಸನಲ್ ವೆಜಿಟೇಬಲ್ ಸೇರಿಸುವುದನ್ನು ಮರೆಯದಿರಿ. ಇಂಥಾ ಸೂಪ್‌ ಕುಡಿಯುವುದು ಮಳೆಗಾಲದಲ್ಲಿ ತೂಕವನ್ನು ಸಮರ್ಪಕವಾಗಿ ನಿರ್ವಹಿಸಲು ನೆರವಾಗುತ್ತದೆ.

Image credits: others

ಆರೋಗ್ಯಕರ ಪಾನೀಯ ಕುಡಿಯಿರಿ

ಮಳೆಗಾಲದಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಹೆಚ್ಚು ಕುಡಿಯಿರಿ. ಇದು ಆರೋಗ್ಯಕ್ಕೆ ಬೇಕಾದ ನ್ಯೂಟ್ರಿಯೆಂಟ್ಸ್‌ನ್ನು ಒದಗಿಸುವುದರ ಜೊತೆಗೆ ತೂಕ ಇಳಿಸಲು ಸಹ ನೆರವಾಗುತ್ತದೆ.

Image credits: others

ಹರ್ಬಲ್‌ ಟೀ

ಮಳೆಗಾಲದ ಚಳಿಗೆ ಹರ್ಬಲ್ ಟೀ ಕುಡಿಯುವುದು ತುಂಬಾ ಒಳ್ಳೇದು. ಲಿಂಬೆ, ಲವಂಗ, ತುಳಸಿ, ಪುದೀನಾ ಮೊದಲಾದವುಗಳನ್ನು ಸೇರಿಸಿದ ಹರ್ಬಲ್ ಟೀ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.

Image credits: others

ಮಾನ್ಸೂನ್ ಸೂಪರ್‌ಫುಡ್‌

ಮಳೆಗಾಲದಲ್ಲಿ ಆಹಾರದಲ್ಲಿ ಅರಿಶಿನ, ಶುಂಠಿ, ಮೆಂತೆ ಮೊದಲಾದ ಪದಾರ್ಥಗಳನ್ನು ಸೇರಿಸುವುದನ್ನು ಮರೆಯದಿರಿ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ತೂಕ ಇಳಿಕೆಗೂ ನೆರವಾಗುತ್ತದೆ.

Image credits: others

ಪ್ರೈಡ್‌ ಸ್ನ್ಯಾಕ್ಸ್ ತಿನ್ನದಿರಿ

ಮಳೆ ಬಂದಾಗ ಸಹಜವಾಗಿಯೇ ಕರಿದ ತಿಂಡಿ ತಿನ್ನುವ ಬಯಕೆಯಾಗುತ್ತದೆ. ಆದರೆ ಇಂಥಾ ಸ್ನ್ಯಾಕ್ಸ್ ತಿನ್ನುವುದನ್ನು ಕಡಿಮೆ ಮಾಡಿದರೆ ತೂಕ ಹೆಚ್ಚಳವಾಗುವ ಭಯ ಕಾಡುವುದಿಲ್ಲ. 

Image credits: others

ಸಮರ್ಪಕ ನಿದ್ದೆ

ಆರೋಗ್ಯ ಚೆನ್ನಾಗಿರಲು ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ಮುಖ್ಯ. ದೇಹಕ್ಕೆ ನಿದ್ದೆ ಕಡಿಮೆಯಾದರೆ ಸುಲಭವಾಗಿ ತೂಕ ಹೆಚ್ಚಾಗಬಹುದು. ಹಾಗಂತ ನಿದ್ದೆ ಅತಿಯಾದರೂ ಒಳ್ಳೆಯದಲ್ಲ.

Image credits: others
Find Next One